¡Sorpréndeme!

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು: ಗೃಹ ಸಚಿವ ಬೊಮ್ಮಾಯಿ ಜನಮೆಚ್ಚುವ ಕೆಲಸ | Oneindia Kannada

2021-05-18 1,613 Dailymotion

ಬೆಡ್, ಐಸಿಯು ಬೆಡ್ ಸಮಸ್ಯೆಗಳ ನಡುವೆ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಮ್ಮ ಸ್ವಕ್ಷೇತ್ರ ಶಿಗ್ಗಾವಿಯಲ್ಲಿ ಜನಮೆಚ್ಚುವ ಕೆಲಸವನ್ನು ಮಾಡಿದ್ದಾರೆ. ತಮ್ಮ ಮನೆಯ ಆವರಣವನ್ನು ಬೊಮ್ಮಾಯಿ ಅವರು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಕೇಸುಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಬೊಮ್ಮಾಯಿ, ತಮ್ಮ ಮನೆಯ ಆವರಣದಲ್ಲಿ ಐವತ್ತು ಹಾಸಿಗೆಗಳ ಕೋವಿಡ್ ಸೆಂಟರ್ ಅನ್ನು ತೆರೆದಿದ್ದಾರೆ. ಇದೇ ಮೊದಲ ಬಾರಿಗೆ ಸಚಿವರೊಬ್ಬರ ಮನೆ ಕೋವಿಡ್ ಕೇಂದ್ರವಾಗಿ ಬದಲಾಗಿದೆ.